ಸಮುದಾಯದ ಮಾನದಂಡಗಳು

Facebook, Instagram, Messenger ಮತ್ತು Threads ‌ಗಳಲ್ಲಿ ಏನನ್ನು ಅನುಮತಿಸಲಾಗಿದೆ ಮತ್ತು ಅನುಮತಿಸಲಾಗುವುದಿಲ್ಲ ಎಂಬುದನ್ನು ಸಮುದಾಯ ಮಾನದಂಡಗಳು ವಿವರಿಸುತ್ತವೆ.
ಪರಿಚಯ
ಈ ಮಾನದಂಡಗಳು ಜನರ ಪ್ರತಿಕ್ರಿಯೆ ಮತ್ತು ತಂತ್ರಜ್ಞಾನ, ಸಾರ್ವಜನಿಕ ಸುರಕ್ಷತೆ ಮತ್ತು ಮಾನವ ಹಕ್ಕುಗಳಂತಹ ಕ್ಷೇತ್ರಗಳಲ್ಲಿನ ತಜ್ಞರ ಸಲಹೆಯನ್ನು ಆಧರಿಸಿವೆ. ಪ್ರತಿಯೊಬ್ಬರ ಅನಿಸಿಕೆಗಳಿಗೆ ಮನ್ನಣೆ ದೊರಕಿಸುವ ನಿಟ್ಟಿನಲ್ಲಿ ಅದರಲ್ಲೂ ವಿಶೇಷವಾಗಿ ಕಡೆಗಣಿಸlda ಅಥವಾ ಸಮಾಜದಿಂದ ದೂರವಿಟ್ಟ ಸಮುದಾಯಗಳ ಬೇರೆ ಬೇರೆ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳಿಗೆ ಬೆಲೆ ದೊರಕಿಸಿ ಕೊಡುವ ಕುರಿತು ಮಾನದಂಡಗಳನ್ನು ರೂಪಿಸಲು ನಾವು ಬಹಳಷ್ಟು ಕಾಳಜಿ ವಹಿಸುತ್ತೇವೆ.
ಪ್ರತಿ ದಿನ, ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಮತ್ತು ಸಮುದಾಯಗಳನ್ನು ನಿರ್ಮಿಸಲು Facebook, Instagram, Messenger ಮತ್ತು Threads ಗಳನ್ನು ಬಳಸುತ್ತಾರೆ. ನಮ್ಮ ಸೇವೆಗಳು ಅನೇಕ ದೇಶಗಳು ಮತ್ತು ಸಂಸ್ಕೃತಿಗಳಾದ್ಯಂತ ಬಿಲಿಯನ್‌ಗಟ್ಟಲೆ ಜನರು ಮತ್ತು ಅನೇಕ ಭಾಷೆಗಳಲ್ಲಿ ಮುಕ್ತವಾಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.
ಸಂವಹನ ನಡೆಸಲು ಜನರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ Facebook Instagram, Messenger ಮತ್ತು Threads ಎಂತಹ ಪ್ರಮುಖ ತಾಣವಾಗಳಾಗಿವೆ ಎಂಬುದನ್ನು Meta ಗುರುತಿಸುತ್ತದೆ ಮತ್ತು ಇಲ್ಲಿ ನಿಂದನೆಯನ್ನು ಈ ನಮ್ಮ ಸೇವೆಯಿಂದ ಹೊರಗಿಡುವ ಕುರಿತು ನಮ್ಮ ಹೊಣೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಅದಕ್ಕಾಗಿಯೇ ಈ ಸೇವೆಗಳಲ್ಲಿ ಯಾವುದನ್ನು ಅನುಮತಿಸಲಾಗಿದೆ ಮತ್ತು ಅನುಮತಿಸಲಾಗುವುದಿಲ್ಲ ಎಂಬುದಕ್ಕೆ ನಾವು ಮಾನದಂಡಗಳನ್ನು ಅಭಿವೃದ್ಧಿಪಡಿಸಿದ್ದೇವೆ.
ಸಮುದಾಯದ ಮಾನದಂಡಗಳ US ಇಂಗ್ಲಿಷ್ ಆವೃತ್ತಿಯು ನೀತಿಗಳ ಅತ್ಯಂತ ನವೀಕೃತ ಗುಂಪನ್ನು ಪ್ರತಿಬಿಂಬಿಸುತ್ತದೆ ಮತ್ತು ಅದನ್ನು ಮುಖ್ಯ ಡಾಕ್ಯುಮೆಂಟ್ ಆಗಿ ಬಳಸಬೇಕು ಎಂಬುದನ್ನು ದಯವಿಟ್ಟು ಗಮನಿಸಿ.
ಧ್ವನಿಗೆ ನಮ್ಮ ಬದ್ಧತೆ
ಜನರ ಅಭಿವ್ಯಕ್ತಿಗಾಗಿ ಸೂಕ್ತ ಜಾಗವನ್ನು ನಿರ್ಮಿಸುವುದು ಮತ್ತು ಅವರ ಧ್ವನಿಯಾಗುವುದು ಸಮುದಾಯ ಮಾನದಂಡಗಳ ಗುರಿಯಾಗಿದೆ. ಲಿಖಿತ ಕಾಮೆಂಟ್‌ಗಳು, ಫೋಟೋಗಳು, ಸಂಗೀತ ಅಥವಾ ಇತರ ಕಲಾತ್ಮಕ ಮಾಧ್ಯಮಗಳ ಮೂಲಕ, ಕೆಲವರು ಒಪ್ಪದಿದ್ದರೂ ಅಥವಾ ಆಕ್ಷೇಪಾರ್ಹವೆಂದು ಕಂಡುಕೊಂಡರೂ, ಜನರು ತಮಗೆ ಸಂಬಂಧಿಸಿದ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಲು ಸಾಧ್ಯವಾಗಬೇಕೆಂದು Meta ಬಯಸುತ್ತದೆ. ಕೆಲವು ಸಂದರ್ಭಗಳಲ್ಲಿ, ವಿಷಯವು ಸುದ್ದಿಗೆ ಅರ್ಹವಾಗಿದ್ದರೆ ಮತ್ತು ಸಾರ್ವಜನಿಕ ಹಿತಾಸಕ್ತಿಯಾಗಿದ್ದರೆ, ನಮ್ಮ ಮಾನದಂಡಗಳಿಗೆ ವಿರುದ್ಧವಾದ ವಿಷಯವನ್ನು ನಾವು ಅನುಮತಿಸುತ್ತೇವೆ. ಹಾನಿಯ ಅಪಾಯದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೌಲ್ಯವನ್ನು ತೂಗಿದ ನಂತರವೇ ನಾವು ಇದನ್ನು ಮಾಡುತ್ತೇವೆ ಹಾಗೂ ಈ ತೀರ್ಮಾನಗಳನ್ನು ಮಾಡಲು ನಾವು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ನೋಡುತ್ತೇವೆ. ಇತರ ಸಂದರ್ಭಗಳಲ್ಲಿ, ವಿಷಯವು ನಮ್ಮ ಮಾನದಂಡಗಳಿಗೆ ವಿರುದ್ಧವಾಗಿದೆ ಎಂಬುದನ್ನು ಸಮಂಜಸವಾಗಿ ಅರ್ಥಮಾಡಿಕೊಳ್ಳಲು ಹೆಚ್ಚುವರಿ ಸಂದರ್ಭವು ನಮಗೆ ಅನುಮತಿಸಿದಾಗ ನಾವು ಅಸ್ಪಷ್ಟ ಅಥವಾ ಸೂಚ್ಯ ಭಾಷೆಯನ್ನು ಬಳಸುವ ವಿಷಯವನ್ನು ತೆಗೆದುಹಾಕಬಹುದು.
ಅಭಿವ್ಯಕ್ತಿಗೆ ನಮ್ಮ ಬದ್ಧತೆಯು ಅತಿಮುಖ್ಯವಾಗಿದೆ, ಆದರೆ ನಿಂದನೆಗೆ ಹೊಸ ಮತ್ತು ಹೆಚ್ಚಿದ ಅವಕಾಶಗಳನ್ನು ಇಂಟರ್ನೆಟ್ ರಚಿಸುತ್ತಿದೆ ಎಂಬುದನ್ನು ನಾವು ಗುರುತಿಸುತ್ತೇವೆ. ಈ ಕಾರಣಗಳಿಗಾಗಿ ನಾವು ಅಭಿವ್ಯಕ್ತಿಯನ್ನು ಮಿತಿಗೊಳಿಸಿದಾಗ, ನಾವು ಅದನ್ನು ಈ ಕೆಳಗಿನ ಒಂದು ಅಥವಾ ಹೆಚ್ಚಿನ ಮೌಲ್ಯಗಳ ಸೇವೆಗಾಗಿ ಮಾಡುತ್ತೇವೆ:
ದೃಢೀಕರಣ
ಜನರು ನೋಡುವ ವಿಷಯವು ಅಧಿಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ದೃಢೀಕರಣವು ಹಂಚಿಕೊಳ್ಳಲು ಉತ್ತಮ ವಾತಾವರಣವನ್ನು ರಚಿಸುತ್ತದೆ ಎಂದು ನಾವು ನಂಬುತ್ತೇವೆ ಮತ್ತು ಅದಕ್ಕಾಗಿಯೇ ನಮ್ಮ ಸೇವೆಗಳನ್ನು ಬಳಸುವ ಜನರು ತಾವು ಯಾರು ಅಥವಾ ತಾವು ಏನು ಮಾಡುತ್ತಿದ್ದಾರೆ ಎಂಬುದನ್ನು ತಪ್ಪಾಗಿ ನಿರೂಪಿಸಲು ನಾವು ಬಯಸುವುದಿಲ್ಲ.
ಸುರಕ್ಷತೆ
Facebook, Instagram, Messenger ಮತ್ತು Threads ‌ಗಳನ್ನು ಸುರಕ್ಷಿತ ಸ್ಥಳಗಳನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ವ್ಯಕ್ತಿಗಳ ಭೌತಿಕ ಭದ್ರತೆಗೆ ಹಾನಿಯಾಗುವ ಅಪಾಯವನ್ನು ಉಂಟುಮಾಡುವ ವಿಷಯವನ್ನು ನಾವು ತೆಗೆದುಹಾಕುತ್ತೇವೆ. ಜನರನ್ನು ಬೆದರಿಸುವ ವಿಷಯವು ಇತರರನ್ನು ಅಂಜಿಸುವ, ಹೊರಗಿಡುವ ಅಥವಾ ಸುಮ್ಮನಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ನಮ್ಮ ಸೇವೆಗಳಲ್ಲಿ ಅದನ್ನು ಅನುಮತಿಸಲಾಗುವುದಿಲ್ಲ.
ಗೌಪ್ಯತೆ
ನಾವು ವೈಯಕ್ತಿಕ ಗೌಪ್ಯತೆ ಮತ್ತು ಮಾಹಿತಿಯನ್ನು ರಕ್ಷಿಸಲು ಬದ್ಧರಾಗಿದ್ದೇವೆ. ಗೌಪ್ಯತೆಯು ಜನರು ತಮ್ಮತನವನ್ನು ಕಾಯ್ದುಕೊಳ್ಳಲು, ನಮ್ಮ ಸೇವೆಗಳಲ್ಲಿ ಹೇಗೆ ಮತ್ತು ಯಾವಾಗ ಹಂಚಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಲು ಮತ್ತು ಸುಲಭವಾಗಿ ಸಂಪರ್ಕಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ.
ಘನತೆ
ಘನತೆ ಮತ್ತು ಹಕ್ಕುಗಳಲ್ಲಿ ಎಲ್ಲಾ ಜನರು ಸಮಾನರು ಎಂದು ನಾವು ನಂಬುತ್ತೇವೆ. ಜನರು ಇತರರ ಘನತೆಯನ್ನು ಗೌರವಿಸುತ್ತಾರೆ ಮತ್ತು ಇತರರಿಗೆ ಕಿರುಕುಳ ನೀಡುವುದಿಲ್ಲ ಅಥವಾ ಅವಮಾನಿಸುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ.
ಸಮುದಾಯದ ಮಾನದಂಡಗಳು
ನಮ್ಮ ಸಮುದಾಯ ಮಾನದಂಡಗಳು ಎಲ್ಲರಿಗೂ, ಪ್ರಪಂಚದಾದ್ಯಂತ ಮತ್ತು AI-ರಚಿತ ವಿಷಯ ಒಳಗೊಂಡಂತೆ ಎಲ್ಲಾ ರೀತಿಯ ವಿಷಯಕ್ಕೆ ಅನ್ವಯಿಸುತ್ತವೆ.
ನಮ್ಮ ಸಮುದಾಯ ಮಾನದಂಡಗಳ ಪ್ರತಿಯೊಂದು ವಿಭಾಗವು “ನೀತಿಯ ತಾರ್ಕಿಕ ವಿವರಣೆ” ಜೊತೆಗೆ ಪ್ರಾರಂಭವಾಗುತ್ತಿದ್ದು, ಅದು ನೀತಿಯ ಗುರಿಗಳನ್ನು ನಿಗದಿಪಡಿಸುತ್ತದೆ ಮತ್ತು ಅದರ ನಂತರ ನಿರ್ದಿಷ್ಟ ನೀತಿ ವಾಕ್ಯಗಳು ಈ ಮುಂದಿನ ವಿಷಯಗಳನ್ನು ವಿವರಿಸುತ್ತವೆ:
ಅನುಮತಿಸದ ವಿಷಯ; ಮತ್ತು
ಜಾರಿಗೊಳಿಸಲು ಹೆಚ್ಚುವರಿ ಮಾಹಿತಿ ಅಥವಾ ಸಂದರ್ಭದ ಅಗತ್ಯವಿರುವ ವಿಷಯ, ಎಚ್ಚರಿಕೆ ಪರದೆಯೊಂದಿಗೆ ಅನುಮತಿಸಲಾದ ವಿಷಯ ಅಥವಾ ಅನುಮತಿಸಲಾದ ಆದರೆ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಮಾತ್ರ ವೀಕ್ಷಿಸಬಹುದಾದ ವಿಷಯ.