ಪರಿಚಯ
ಈ ಮಾನದಂಡಗಳು ಜನರ ಪ್ರತಿಕ್ರಿಯೆ ಮತ್ತು ತಂತ್ರಜ್ಞಾನ, ಸಾರ್ವಜನಿಕ ಸುರಕ್ಷತೆ ಮತ್ತು ಮಾನವ ಹಕ್ಕುಗಳಂತಹ ಕ್ಷೇತ್ರಗಳಲ್ಲಿನ ತಜ್ಞರ ಸಲಹೆಯನ್ನು ಆಧರಿಸಿವೆ. ಪ್ರತಿಯೊಬ್ಬರ ಅನಿಸಿಕೆಗಳಿಗೆ ಮನ್ನಣೆ ದೊರಕಿಸುವ ನಿಟ್ಟಿನಲ್ಲಿ ಅದರಲ್ಲೂ ವಿಶೇಷವಾಗಿ ಕಡೆಗಣಿಸlda ಅಥವಾ ಸಮಾಜದಿಂದ ದೂರವಿಟ್ಟ ಸಮುದಾಯಗಳ ಬೇರೆ ಬೇರೆ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳಿಗೆ ಬೆಲೆ ದೊರಕಿಸಿ ಕೊಡುವ ಕುರಿತು ಮಾನದಂಡಗಳನ್ನು ರೂಪಿಸಲು ನಾವು ಬಹಳಷ್ಟು ಕಾಳಜಿ ವಹಿಸುತ್ತೇವೆ.
ಪ್ರತಿ ದಿನ, ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಮತ್ತು ಸಮುದಾಯಗಳನ್ನು ನಿರ್ಮಿಸಲು Facebook, Instagram, Messenger ಮತ್ತು Threads ಗಳನ್ನು ಬಳಸುತ್ತಾರೆ. ನಮ್ಮ ಸೇವೆಗಳು ಅನೇಕ ದೇಶಗಳು ಮತ್ತು ಸಂಸ್ಕೃತಿಗಳಾದ್ಯಂತ ಬಿಲಿಯನ್‌ಗಟ್ಟಲೆ ಜನರು ಮತ್ತು ಅನೇಕ ಭಾಷೆಗಳಲ್ಲಿ ಮುಕ್ತವಾಗಿ ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ.
ಸಂವಹನ ನಡೆಸಲು ಜನರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ Facebook Instagram, Messenger ಮತ್ತು Threads ಎಂತಹ ಪ್ರಮುಖ ತಾಣವಾಗಳಾಗಿವೆ ಎಂಬುದನ್ನು Meta ಗುರುತಿಸುತ್ತದೆ ಮತ್ತು ಇಲ್ಲಿ ನಿಂದನೆಯನ್ನು ಈ ನಮ್ಮ ಸೇವೆಯಿಂದ ಹೊರಗಿಡುವ ಕುರಿತು ನಮ್ಮ ಹೊಣೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಅದಕ್ಕಾಗಿಯೇ ಈ ಸೇವೆಗಳಲ್ಲಿ ಯಾವುದನ್ನು ಅನುಮತಿಸಲಾಗಿದೆ ಮತ್ತು ಅನುಮತಿಸಲಾಗುವುದಿಲ್ಲ ಎಂಬುದಕ್ಕೆ ನಾವು ಮಾನದಂಡಗಳನ್ನು ಅಭಿವೃದ್ಧಿಪಡಿಸಿದ್ದೇವೆ.
ಸಮುದಾಯದ ಮಾನದಂಡಗಳ US ಇಂಗ್ಲಿಷ್ ಆವೃತ್ತಿಯು ನೀತಿಗಳ ಅತ್ಯಂತ ನವೀಕೃತ ಗುಂಪನ್ನು ಪ್ರತಿಬಿಂಬಿಸುತ್ತದೆ ಮತ್ತು ಅದನ್ನು ಮುಖ್ಯ ಡಾಕ್ಯುಮೆಂಟ್ ಆಗಿ ಬಳಸಬೇಕು ಎಂಬುದನ್ನು ದಯವಿಟ್ಟು ಗಮನಿಸಿ.